ಖಲೀದ್ ಮಸೂದ್ ಅಲಿಯಾಸ್ ಖಲೀದ್ ಚೌಧರಿಯನ್ನು ೨೦೧೭ರ ಲಂಡನ್ನಿನ ವೆಸ್ಟ್ಮಿನ್ಸ್ಟರ್ ಮೇಲಿನ ಮಾರಣಾಂತಿಕ ದಾಳಿಯ ಏಕೈಕ ದೋಷಿಯೆಂದು ಗುರುತಿಸಲಾಗಿದೆ. ಈ ದಾಳಿಯ ಸಂದರ್ಭದಲ್ಲಿ ಈತನು ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ. == ಹಿನ್ನೆಲೆ == ದೇಶದ ದೇಶೀಯ ಗುಪ್ತಚರ ಸಂಸ್ಥೆಯಾದ MI5 ನಡೆಸಿರುವ ಪ್ರಾಥಮಿಕ ತನಿಖೆಗಳ ಮೂಲಕ ಈತನು ಹಿಂದೊಮ್ಮೆ ಹಿಂಸಾತ್ಮಕ ಉಗ್ರಗಾಮಿತ್ವವನ್ನು ಹೊಂದಿದ್ದ ಎನ್ನುವ ಅಂಶವು ಬೆಳಕಿಗೆ ಬಂದಿದೆ. ಹಲವಾರು ಪತ್ರಿಕಾವರದಿಗಳು ಸೂಚಿಸುವಂತೆ ಈತನು ಇನ್ನೂ ಹಲವಾರು ಹೆಸರುಗಳಿಂದ ಕರೆಯಲ್ಪಟ್ಟಿದ್ದಿರಬಹುದು. ಮಸೂದ್ ಎಸಗಿದ್ದ ಹಲವಾರು ಕ್ರಿಮಿನಲ್ ಆರೋಪಗಳಿಂದಾಗಿ ಪೊಲೀಸರಿಗೆ ಈ ಮೊದಲೇ ಪರಿಚಿತನಾಗಿದ್ದನು. ಹಳೆಯ ಕ್ರಿಮಿನಲ್ ಆರೋಪವೆಂದರೆ ೧೯೮೩ರ ಕ್ರಿಮಿನಲ್ ಹಾನಿ ಹಾಗೂ ಇತ್ತೀಚಿನ ಆರೋಪವೆಂದರೆ ಡಿಸೆಂಬರ್ ೨೦೦೩ರಲ್ಲಿ ಅನಧಿಕೃತ ಚಾಕುವಿನ ಒಡೆತನವಾಗಿವೆ. ಅವುಗಳೊಂದಿಗೆ, ಹಲ್ಲೆಗಳಿಗೆ ಸಂಬಂಧಿಸಿದ ಆರೋಪಗಳು, ಗಂಭೀರ ದೈಹಿಕ ಹಾನಿ ಮತ್ತು ಇತರ ಸಾರ್ವಜನಿಕ ಅಪರಾಧಗಳ ಮೇಲಿನ ಆರೋಪಗಳೂ ಸೇರಿವೆ. == ವೈಯಕ್ತಿಕ ಜೀವನ == ಮಸೂದ್ ಡಿಸೆಂಬರ್ ೨೫, ೧೯೬೪ರಲ್ಲಿ ಇಂಗ್ಲೆಡಿನ ಕೆಂಟ್‍ನಲ್ಲಿ ಜನಿಸಿದ. ಈತನ ಹುಟ್ಟುಹೆಸರು ಇನ್ನೂ ತಿಳಿದಿಲ್ಲದೇ ಇರಬಹುದೆದು ಪೊಲೀಸರು ಶಂಕಿಸಿದ್ದಾರೆ. ಮಸೂದ್ ಒಬ್ಬ ಪರಿವರ್ತಿತ ಮುಸಲ್ಮಾನನಾಗಿದ್ದ. ಈತನಿಗೆ ಮದುವೆಯಾಗಿದ್ದು ಒಂದು ಅಥವಾ ಮೂರು ಮಕ್ಕಳ ತಂದೆಯಾಗಿದ್ದ. ಈತನಿಗೆ ದೇಹದಾರ್ಢ್ಯದಲ್ಲಿ ಆಸಕ್ತಿಯಿತ್ತೆಂದೂ, ವಿನ್‍ಸನ್‍ ಗ್ರೀನ್‍ನ ಹೇಗ್ಲಿ ರಸ್ತೆಯ ರೆಸ್ಟೋರೆಂಟೊಂದರ ಮೇಲೆ ವಾಸವಿದ್ದನೆಂದೂ, ಸಾಮಾನ್ಯವಾಗಿ ಸಾಂಪ್ರದಾಯಿಕ ಇಸ್ಲಾಂ ಬಿಳಿ ನಿಲುವಂಗಿಯನ್ನು ಧರಿಸುತ್ತಿದ್ದನೆಂದೂ ತಿಳಿದುಬಂದಿದೆ. ಹಿಂದಿನ ನೆರೆಹೊರೆಯವರ ಪ್ರಕಾರ ಮಸೂದ್ "ತನ್ನ ತೋಟದ ಆರೈಕೆ ಮಾಡಲಿಚ್ಛಿಸುವ ಯಾವುದೇ ಸಾಮಾನ್ಯ ಕೌಟುಂಬಿಕ ವ್ಯಕ್ತಿಯಂತೆ ಕಾಣುತ್ತಿದ್ದ" ಎಂದೂ, "ಸಂಜೆಯಾದ ಬಳಿಕ ವಿರಳವಾಗಿ ಹೊರನಡೆಯುತ್ತಿದ್ದ" ಎಂದು, ಮತ್ತು "ಮಸೂದ್ ತನ್ನ ಮಕ್ಕಳನ್ನು ಶಾಲೆಗೆ ನಡೆದೇ ಕರೆದುಕೊಂಡು ಹೋಗುತ್ತಿದ್ದ" ಎಂದೂ ತಿಳಿದುಬಂದಿದೆ. == ಉಲ್ಲೇಖಗಳು ==